Revelation of John 5

ಸುರುಳಿಯೂ ಕುರಿಮರಿಯೂ

1ನಾನು
5:1 ಯೆಹೆ. 2:9, 10:
ಸಿಂಹಾಸನದ ಮೇಲೆ ಕುಳಿತಿದ್ದಾತನ ಬಲಗೈಯಲ್ಲಿ ಒಂದು
5:1 ಪುಸ್ತಕ
ಸುರುಳಿಯನ್ನು ಕಂಡೆನು. ಅದರ ಒಳಭಾಗದಲ್ಲಿಯೂ ಮತ್ತು ಹೊರಭಾಗದಲ್ಲಿಯೂ ಬರೆಯಲ್ಪಟ್ಟಿತ್ತು.
5:1 ಯೆಶಾ. 29:11; ದಾನಿ. 12:4:
ಅದು ಏಳು ಮುದ್ರೆಗಳಿಂದ ಮುದ್ರಿತವಾಗಿತ್ತು.
2ಇದಲ್ಲದೆ
5:2 ಪ್ರಕ. 10:1; 18:21:
ಬಲಿಷ್ಠನಾದ ಒಬ್ಬ ದೇವದೂತನು <<ಈ ಸುರುಳಿಯನ್ನು ಬಿಚ್ಚುವುದಕ್ಕೂ ಇದರ ಮುದ್ರೆಗಳನ್ನು ಒಡೆಯುವುದಕ್ಕೂ ಯಾವನು ಯೋಗ್ಯನು?>> ಎಂದು ಮಹಾಶಬ್ದದಿಂದ ಕೂಗುವುದನ್ನು ಕಂಡೆನು.

3ಆದರೆ ಆ ಸುರುಳಿಯನ್ನು ತೆರೆಯುವುದಕ್ಕಾದರೂ ಅದರೊಳಗೆ ನೋಡುವುದಕ್ಕಾದರೂ ಪರಲೋಕದಲ್ಲಿಯಾಗಲಿ, ಭೂಮಿಯಲ್ಲಿಯಾಗಲಿ, ಭೂಮಿಯ ಕೆಳಗಾಗಲಿ ಯಾರಿಂದಲೂ ಆಗಲಿಲ್ಲ. 4ಸುರುಳಿಯನ್ನು ತೆರೆಯುವುದಕ್ಕಾಗಲಿ ಅದನ್ನು ನೋಡುವುದಕ್ಕಾಗಲಿ ಯೋಗ್ಯನಾದವನು ಒಬ್ಬನೂ ಸಿಕ್ಕಲಿಲ್ಲವೆಂದು ನಾನು ಬಹಳವಾಗಿ ದುಃಖಿಸುತ್ತಿರುವಾಗ. 5ಹಿರಿಯರಲ್ಲಿ ಒಬ್ಬನು ನನಗೆ, <<ಅಳಬೇಡ ನೋಡು,
5:5 ಇಬ್ರಿ. 7:14:
ಯೂದಕುಲದಲ್ಲಿ ಜನಿಸಿದ
5:5 ಅಥವಾ, ಸಿಂಹಪ್ರಾಯನೂ; ಆದಿ. 49:9:
ಸಿಂಹವೂ
5:5 ಯೆಶಾ. 11:1, 10; ರೋಮಾ. 15:12; ಪ್ರಕ. 22:16:
ದಾವೀದನ ವಂಶಜನೂ ಆಗಿರುವ ಒಬ್ಬನು, ಆ ಸುರುಳಿಯನ್ನು ಅದರ ಏಳು ಮುದ್ರೆಗಳನ್ನೂ ತೆರೆಯುವುದಕ್ಕೆ ಜಯವೀರನಾಗಿದ್ದಾನೆ>> ಎಂದು ಹೇಳಿದನು.

6ಸಿಂಹಾಸನವು, ನಾಲ್ಕು ಜೀವಿಗಳೂ ಇದ್ದ ಸ್ಥಳಕ್ಕೂ ಮತ್ತು ಹಿರಿಯರು ಇದ್ದ ಸ್ಥಳಕ್ಕೂ ಮಧ್ಯದಲ್ಲಿ
5:6 ಎಲ್ಲಾ ಸ್ಥಳಗಳಲ್ಲಿಯೂ ಹಾಗೆಯೇ; ಯೆಶಾ. 53:7; ಯೋಹಾ. 1:29, 36; 1 ಪೇತ್ರ. 1:19. ಪ್ರಕ. 5:9, 12; 13:8:
ಒಂದು ಕುರಿಮರಿಯು ವಧಿಸಲ್ಪಟಂತೆ ನಿಂತಿರುವುದನ್ನು ಕಂಡೆನು. ಅದಕ್ಕೆ ಏಳು ಕೊಂಬುಗಳೂ
5:6 ಜೆಕ. 3:9; 4:10:
ಏಳು ಕಣ್ಣುಗಳೂ ಇದ್ದವು. ಅವು ಏನೆಂದರೆ ಭೂಮಿಯ ಮೇಲೆಲ್ಲಾ ಕಳುಹಿಸಲ್ಪಟ್ಟಿರುವ ದೇವರ ಏಳು ಆತ್ಮಗಳೇ.
7ಈತನು ಮುಂದೆ ಬಂದು ಸಿಂಹಾಸನದ ಮೇಲೆ ಕುಳಿತಿದ್ದಾತನ ಬಲಗೈಯೊಳಗಿಂದ ಆ ಸುರುಳಿಯನ್ನು ತೆಗೆದುಕೊಂಡನು.

8ಅದನ್ನು ತೆಗೆದುಕೊಂಡಾಗ ಆ ನಾಲ್ಕು ಜೀವಿಗಳೂ ಇಪ್ಪತ್ನಾಲ್ಕು ಮಂದಿ ಹಿರಿಯರೂ ಕುರಿಮರಿಯಾದಾತನ ಪಾದಕ್ಕೆ ಅಡ್ಡ
5:8 ಪ್ರಕ. 4:10:
ಬಿದ್ದರು. ಹಿರಿಯರ ಕೈಗಳಲ್ಲಿ
5:8 ಪ್ರಕ. 14:2; 15:2:
ವೀಣೆಗಳೂ
5:8 ಕೀರ್ತ. 141:2; ಪ್ರಕ. 8:3, 4:
ದೇವಜನರ ಪ್ರಾರ್ಥನೆಗಳೆಂಬ ಧೂಪದಿಂದ ತುಂಬಿದ್ದ
5:8 ಪ್ರಕ. 15:7:
ಚಿನ್ನದ ಧೂಪಾರತಿಗಳೂ ಇದ್ದವು.

9ಅವರು
5:9 ಕೀರ್ತ. 40. 3; 96:1; ಯೆಶಾ. 42:10; ಪ್ರಕ. 14:3:
ಹೊಸಹಾಡನ್ನು ಹಾಡುತ್ತಾ,

<<ನೀನು ಸುರುಳಿಯನ್ನು ಸ್ವೀಕರಿಸಲು
ಅದರ ಮುದ್ರೆಯನ್ನು ಒಡೆಯಲು ನೀನು ಅರ್ಹನಾಗಿದ್ದಿ.
ನೀನು ವಧಿಸಲ್ಪಟ್ಟು,
5:9 ವ. 6:
ಯಜ್ಞಾರ್ಪಿತನಾಗಿ ನಿನ್ನ ರಕ್ತದಿಂದ
5:9 ಪ್ರಕ. 7:9; 11:9; 14:6; ದಾನಿ. 3:4:
ಸಕಲ ಕುಲ, ಭಾಷೆ, ಜನ, ಜನಾಂಗಗಳನ್ನು
5:9 ಪ್ರಕ. 14:3, 4; 2 ಪೇತ್ರ. 2:1:
ದೇವರಿಗಾಗಿ ಕೊಂಡುಕೊಂಡಿರುವೆ.
10ಅವರನ್ನು ನಮ್ಮ ದೇವರಿಗೋಸ್ಕರ ರಾಜ್ಯವನ್ನಾಗಿಯೂ,
5:10 ವಿಮೋ. 19:6; ಪ್ರಕ. 1:6:
ಯಾಜಕರನ್ನಾಗಿಯೂ ಮಾಡಿರುವೆ.
ಅವರು ಭೂಮಿಯನ್ನು ಆಳುವರು.>>

11ಇದಲ್ಲದೆ ನಾನು ನೋಡಲಾಗಿ ಸಿಂಹಾಸನದ, ಜೀವಿಗಳ ಹಾಗೂ ಹಿರಿಯರ ಸುತ್ತಲೂ ಬಹುಮಂದಿ ದೇವದೂತರ ಧ್ವನಿಯನ್ನು ಕೇಳಿದೆನು.
5:11 ದಾನಿ. 7:19; ಇಬ್ರಿ. 12:22:
ಅವರ ಸಂಖ್ಯೆಯು ಲಕ್ಷೋಪಲಕ್ಷವಾಗಿಯೂ ಕೋಟ್ಯಾನುಕೋಟಿಯಾಗಿಯೂ ಇತ್ತು.
12ಅವರು

<<ವಧಿಸಲ್ಪಟ್ಟ ಕುರಿಯು
5:12 ಪ್ರಕ. 4:11:
ಬಲ, ಐಶ್ವರ್ಯ, ಜ್ಞಾನ, ಸಾಮರ್ಥ್ಯ,
ಘನತೆ, ಮಹಿಮೆ ಸ್ತೋತ್ರಗಳನ್ನು ಹೊಂದುವುದಕ್ಕೆ ಯೋಗ್ಯನು>>

ಎಂದು ಮಹಾಧ್ವನಿಯಿಂದ ಹಾಡಿದರು.

13ಇದಲ್ಲದೆ
5:13 ಕೀರ್ತ. 145:21; 150. 6:
ಆಕಾಶದಲ್ಲಿಯೂ, ಭೂಮಿಯ ಮೇಲೆಯೂ, ಭೂಮಿಯ ಕೆಳಗಡೆಯೂ, ಸಮುದ್ರದಲ್ಲಿಯೂ ಇರುವ ಎಲ್ಲಾ ಸೃಷ್ಟಿಗಳೂ ಅಂದರೆ ಭೂಮ್ಯಾಕಾಶ ಸಮುದ್ರಗಳೊಳಗೆ ಇರುವುದೆಲ್ಲವೂ,

<<ಸಿಂಹಾಸನದ ಮೇಲೆ ಕುಳಿತಿದ್ದಾತನಿಗೂ ಕುರಿಮರಿಯಾದಾತನಿಗೂ
ಸ್ತೋತ್ರ, ಗೌರವ, ಮಹಿಮೆ, ಆಧಿಪತ್ಯಗಳು
ಯುಗಯುಗಾಂತರಗಳಲ್ಲಿಯೂ ಇರಲಿ>>

ಎಂದು ಹೇಳುವುದನ್ನು ಕೇಳಿದೆನು.
ಆಗ ನಾಲ್ಕು ಜೀವಿಗಳು
5:14 ಪ್ರಕ. 7:12; 19:4:
<<ಆಮೆನ್>> ಅಂದವು ಮತ್ತು
5:14 ವ. 8; ಪ್ರಕ. 4:10:
ಹಿರಿಯರು ಅಡ್ಡಬಿದ್ದು ಆರಾಧಿಸಿದರು. 14

Copyright information for KanULB